News & Events

ಅಮೃತಧಾರಾ ಗೋಶಾಲೆ ಗೋಲೋಕ ಬಜಕೂಡ್ಲವಿನ ಗೋವರ್ಧನ ಧರ್ಮಮಂದಿರದಲ್ಲಿ ದಿನಾಂಕ 4-3-2019 ನೇ ಸೋಮವಾರ ಸಾಯಂಕಾಲ ಘಂಟೆ 5 ರಿಂದ ಮಹಾಶಿವರಾತ್ರಿ ಮಹೋತ್ಸವವನ್ನು ಮಹಾಮಂಡಲ ಧರ್ಮ ಕರ್ಮ ಸಹಕಾರ್ಯದರ್ಶಿ ವೇ| ಮೂ | ಕೇಶವಪ್ರಸಾದ ಕೂಟೇಲು ಇವರ ನೇತೃತ್ವದಲ್ಲಿ ಶಿವಪೂಜೆ, ಎಣ್ಮಕಜೆ ವಲಯದ ಹತ್ತು ಮಂದಿ ರುದ್ರದ್ಯಾಯಿಗಳಿಂದ ರುದ್ರಪಾರಾಯಣ, ಶಿವಪಂಚಾಕ್ಷರೀ ಮಂತ್ರಜಪ ಹಾಗೂ ವಿಭೂತಿ ತಯಾರಿಗಾಗಿ ಬೆರಣಿ ಉರಿಸುವ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.


ಮುಳ್ಳೇರಿಯಾ ಮಂಡಲ ವಿಧ್ಯಾರ್ಥಿ ವಾಹಿನಿ ಪ್ರಧಾನ ಕೇಶವಪ್ರಸಾದ ಎಡಕ್ಕಾನ ಇವರು ಗೋಪೂಜೆ ನಡೆಸುಮೂಲಕ ತಮ್ಮ ಜನ್ಮದಿನವನ್ನು ಸಕುಟುಂಬಿಕರಾಗಿ ಗೋಶಾಲೆಯಲ್ಲಿ ಆಚರಿಸಿದರು.
ಮುಳ್ಳೇರಿಯಾ ಮಂಡಲ ಕಾರ್ಯದರ್ಶಿಗಳು, ಎಣ್ಮಕಜೆ ವಲಯ ಪದಾಧಿಕಾರಿಗಳು, ಗೋಶಾಲೆ ಪದಾಧಿಕಾರಿಗಳು ಹಾಗು ಗೋಭಕ್ತರು ಈ ಪುಣ್ಯ ಕಾರ್ಯದಲ್ಲಿ ಭಾಗಿಯಾದರು.

Leave a Reply



There are no replies at the moment.