News & Events

ಶ್ರೀ ಗೋವರ್ಧನ ಧರ್ಮಮಂದಿರ

 

ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾ ಸ್ವಾಮಿಗಳವರ ಅಮೃತಹಸ್ತದಿಂದ ಉದ್ಘಾಟನೆಗೊಂಡ ಅಮೃತಧಾರಾ ಗೋಶಾಲೆಯ ಹಿಂಬದಿಯಲ್ಲಿದೆ ಈ ಧರ್ಮಮಂದಿರ.
ಗೋಗ್ರಾಮಯಾತ್ರೆಯಲ್ಲಿ ದೇಶದಾದ್ಯಂತ ಸಂಚರಿಸಿ ಪೂಜೆಗೊಂಡ ಶ್ರೀ ಗೋಪಾಲಕೃಷ್ಣ ದೇವರು ಧರ್ಮಮಂದಿರದಲ್ಲಿದ್ದಾನೆ. ಸನಿಹದಲ್ಲೇ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಇದೆ. ಇಲ್ಲಿಗೆ ಶ್ರೀ ಗುರುಗಳ ಪೂರ್ಣಾಶೀರ್ವಾದವಿದೆ, ದೇವತಾಸಾನಿಧ್ಯವಿದೆ.
ಇಂತಹ ವಿಶೇಷತೆಯನ್ನು ಗಮನಿಸಿ ಗೋಶಾಲೆಯ ಸಂಘಟಕರು ಇರಿಸಿದ ಪುಟ್ಟಹೆಜ್ಜೆಯೇ ವಿಶಾಲವಾದ ಶ್ರೀ ಗೋವರ್ಧನ ಧರ್ಮಮಂದಿರದ ನಿರ್ಮಾಣಕ್ಕೆ ಕಾರಣವಾಯಿತು. ಎಣ್ಮಕಜೆ ವಲಯದವರ ನೇತೃತ್ವಕ್ಕೆ ಮುಳ್ಳೇರಿಯಾ ಮಂಡಲದಿಂದಲೂ ಸಹಕಾರ ದೊರೆಯಿತು.
ಇತ್ತೇಚಿನ ದಿನಗಳಲ್ಲಿ ಮನೆಗಳಲ್ಲಿ ವಿಶೇಷ ಕಾರ್ಯಕ್ರಮ ಮಾಡುವ ಸಂದರ್ಭದಲ್ಲಿ ಸ್ಥಳದ ಅಭಾವ, ಪರಿಕರಗಳ ಜೋಡಣೆ, ಶುಚೀಕರಣದ ಸಮಸ್ಯೆ ಎದುರಾಗುತ್ತಿದೆ. ವಾಹನ ನಿಲುಗಡೆಯೂ ಸಮಸ್ಯೆಯೂ ಇದೆ. ಆದರೆ ಧರ್ಮಮಂದಿರದಲ್ಲಿ ಪೂಜೆ, ಹವನ, ನಿಶ್ಚಿತಾರ್ಥ ಮುಂತಾದ ಶುಭಕಾರ್ಯಗಳನ್ನು ನಡೆಸಲು ಪ್ರಶಸ್ತವಾದಂತಹ ಸ್ಥಳ. ಅಂದಾಜು 300 ಜನ ಸಾಂಪ್ರದಾಯಿಕ ಶೈಲಿಯ ಭೋಜನ ಮಾಡುವಂತಹ ವ್ಯವಸ್ಥೆ ಇದೆ. ಇದಕ್ಕೆ ಹೊಂದಿಕೊಂಡಂತೆ ಪಾಕಶಾಲೆ, ವಿಶ್ರಾಂತಿ ಕೋಣೆ ಮತ್ತು ಅಡುಗೆ ತಯಾರಿಗಿರುವ ಪಾತ್ರಸಾಮಾನುಗಳಿವೆ. ಪೂಜಾ ಸಾಮಾಗ್ರಿಗಳೂ ಇವೆ.

ಇಲ್ಲಿ ಶ್ರೀ ವಾಲ್ಮೀಕೀಪಾರಾಯಣ, ಗೋಪಾಷ್ಟಮೀ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಬಹಳಷ್ಟು ಜನ ವಿವಿಧ ಪೂಜೆ, ಹವನಗಳನ್ನು ಮಾಡಿಸಿ ಸಂಕಷ್ಟಗಳನ್ನು ನಿವಾರಿಸಿಗೊಂಡಿದ್ದಾರೆ.

ಸಂಪರ್ಕ: ಜಗದೀಶ ಬಿ.ಜಿ.: 9645643499
ವೇ. ಮೂ. ಕೂಟೇಲು ಕೇಶವಪ್ರಸಾದ ಭಟ್ಟ: 9480159191
ಟಿ.ಶ್ರೀಧರಭಟ್ಟ : 9447431772.

ಬರಹ: ವೈ ವಿ ರಮೇಶ ಭಟ್ ಕಾಸರಗೋಡು ವಲಯ ಅಧ್ಯಕ್ಷ

➖➖➖➖➖➖➖➖

ಅಮೃತಧಾರಾ ಗೋಶಾಲೆ
" ಗೋಲೋಕ " ಬಜಕೂಡ್ಲು,
ಅಂಚೆ : ಪೆರ್ಲ
ಕಾಸರಗೋಡು 671552

Leave a Reply



There are no replies at the moment.