News & Events

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಮಹೋನ್ನತ ಕಾಮದುಘಾ ಯೋಜನೆಯ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಮೃತಧಾರಾ ಗೋಶಾಲೆ, ಗೋಲೋಕ ಬಜಕೂಡ್ಲುವಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯಕ್ತ ಸಾಯಂಕಾಲ 6 ರಿಂದ ಭಜನೆ, ಗೋಪೂಜೆ, ಗೋಪಾಲಕೃಷ್ಣ ಪೂಜೆ, ದುರ್ಗಾ ಪೂಜೆ, ಸಾಮೂಹಿಕ ವಿಷ್ಣು ಸಹಸ್ರನಾಮ ಹಾಗು ಲಲಿತಾ ಸಹಸ್ರನಾಮ ಪಾರಾಯಣ ಕೇಪು ವಲಯ ವೈದಿಕ ಪ್ರಮುಖ ವೇ.ಮೂ. ಮಹೇಶ ಉಪಾದ್ಯಾಯ ಇವರ ನೇತೃತ್ವದಲ್ಲಿ ಜರಗಿತು.

ರಾತ್ರಿ 10 ಘಂಟೆಗೆ ಕೃಷ್ಣ ಜನ್ಮಾಷ್ಟಮಿ ಪೂಜೆ ಕೃಷ್ಣ ಜನ್ಮೋತ್ಸವ, ಮಧ್ಯರಾತ್ರಿ 12 ಘಂಟೆಗೆ ಅರ್ಘ್ಯ ಪ್ರದಾನ, ಜೋಗುಳ ಗೀತೆಯೊಂದಿಗೆ ಶ್ರೀ ದೇವರಿಗೆ ತೊಟ್ಟಿಲು ಮಹೋತ್ಸವ, ಶಯನೋತ್ಸವ ವೈಭವದಿಂದ ಜರಗಿತು.   

Leave a Reply



There are no replies at the moment.