ಅಮೃತಧಾರಾ ಗೋಶಾಲೆ, ಗೋಲೋಕ, ಬಜಕೂಡ್ಲು.
ತಾ 20/10/17 ಶುಕ್ರವಾರ ದಿಂದ ತಾ29/10/17 ಆದಿತ್ಯ ವಾರದ ವರೆಗೆ.
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಶ್ರೀ ರಾಮಚಂದ್ರಾಪುರ ಮಠ ಹೊಸನಗರದ ಅಂಗಸಂಸ್ಥೆಯಾದ ಅಮೃತಧಾರಾ ಗೋಶಾಲೆ, ಗೋಲೋಕ ಬಜಕೂಡ್ಲುವಿನಲ್ಲಿ ಗೋಕರ್ಣ ಮಾಹಾಮಂಡಲದ ಮುಳ್ಳೇರಿಯಾ ಹವ್ಯಕ ಮಂಡಲದ ವತಿಯಿಂದ " ಶ್ರೀ ಮದ್ವಾಲ್ಮೀಕಿ ರಾಮಾಯಣ ಪಾರಾಯಣ ನವಾಹ " ಕಾರ್ಯಕ್ರಮವು ವಿಧದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ತಾ 20/10/2017 ಶುಕ್ರವಾರದಿಂದ ಮೊದಲ್ಗೊಂಡು ನವಾಹ ವಿಧಿಯಲ್ಲಿ 28/10/2017 ತನಕ, 29/10/2017 ರಂದು “ಶ್ರೀರಾಮ ಪಟ್ಟಾಭಿಷೇಕದೊಂದಿಗೆ” ವೈಭವದಿಂದ ಜರಗಿತು.
ತಾ 20/10/2017 ರಂದು ಧಾರ್ಮಿಕ ವಿಧಿ ವಿಧಾನಗಳ ಅಂಗವಾಗಿ ದೀಪ ಜ್ವಲನ, ಸಾಮೂಹಿಕ ಪ್ರಾರ್ಥನೆ, ಧ್ವಜಾರೋಹಣ, ಶಂಖನಾದ , ಗುರುವಂದನೆ, ಗೋವಂದನೆ, ನಾಂದೀ-ಪುಣ್ಯಾಹ, ಪ್ರಧಾನ ಸಂಕಲ್ಪ, ಋತ್ವಿಗ್ವರಣ, ಕಲಶ ಪೂಜೆ, ಗಣಪತಿ ಹವನಗಳೊಂದಿಗೆ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಸಂಕಲ್ಪಿತ ಶ್ರೀ ಮದ್ವಾಲ್ಮೀಕಿ ರಾಮಾಯಣ ಪಾರಾಯಣ ನವಾಹ ಕಾರ್ಯಕ್ರಮವು ಮಹಾ ಮಂಡಲ ಧರ್ಮಕರ್ಮ ವಿಭಾಗ ಸಹಕಾರ್ಯದರ್ಶಿ ವೇ| ಮೂ| ಕೇಶವಪ್ರಸಾದ ಕೂಟೇಲು ಅವರ ನೇತೃತ್ವದಲ್ಲಿ ಹನ್ನೆರಡು ಮಂದಿ ವೈದಿಕ ವಿಧ್ವಾಂಸರಿಂದ ಅಮೃತಧಾರಾ ಗೋಶಾಲೆಯ “ಸಾಕೇತ” ಮಂಟಪದಲ್ಲಿ ಆರಂಭವಾಯಿತು.
ಮುಳ್ಳೇರಿಯಾ ಮಂಡಲ ದಿಗ್ದರ್ಶಕರಾದ ಬಿ.ಜಿ ರಾಮ ಭಟ್ ಇವರಿಂದ ಧ್ವಜಾರೋಹಣ.
ವಾಲ್ಮೀಕೀ ರಾಮಾಯಣ ಪಾರಾಯಣ ಪ್ರಯುಕ್ತ ಕಲಶದಲ್ಲಿ ಗುರು, ಗಣಪತಿ ಹಾಗು ವರುಣ ಶಾಲಿಗ್ರಾಮದಲ್ಲಿ ಗೋಪಾಲಕೃಷ್ಣ, ಶ್ರೀರಾಮ ಚಂದ್ರ ಸೀತಾ ಮಾತೆ, ಕೌಸಲ್ಯೆ ದಶರಥ, ಲಕ್ಷ್ಮಣ, ಭರತ, ಶತೃಘ್ನ, ಆದಿತ್ಯಾದಿ ನವಗ್ರಹರು, ಇಂದ್ರಾದ್ಯಷ್ಟ ಲೋಕಪಾಲರು, ದುರ್ಗಾದ್ಯಷ್ಟ ದೇವತೆಗಳು, ನಾರದ, ಬ್ರಹ್ಮ, ಆಂಜನೇಯನ ಪುಸ್ತಕ ಪೀಠದಲ್ಲಿ ವಾಲ್ಮೀಕಿ ಋಷಿಗಳು ಹಾಗು ಸೀತಾ ರಾಮಚಂದ್ರ ದೇವರ ಆವಾಹನೆಯೊಂದಿಗೆ ಪೂಜಿಸಲಾಯಿತು.
ರಾಮಚರಿತೆಯನ್ನು ಕೇಳಲು ಸಾನಿದ್ಯವಹಿಸುವ ಹನುಮಂತ ದೇವರಿಗೆ ವಿಷೇಶ ಹನುಮತ್ಪೀಠದ ವ್ಯವಸ್ಥೆ.
ಶ್ರೀ ಗುರುಗಳು ವಿಷೇಶ ಅನುಗ್ರಹ ಮಂತ್ರಾಕ್ಷೆ ಸಾಕೇತ ಮಂದಿರಕ್ಕೆ ಕಳುಹಿಸಿಕೊಟ್ಟರು.
ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಮಹಾ ಮಂಡಲ ಧರ್ಮಕರ್ಮ ವಿಭಾಗ ಸಹಕಾರ್ಯದರ್ಶಿ ವೇ| ಮೂ| ಕೇಶವಪ್ರಸಾದ ಕೂಟೇಲು ಅವರ ನೇತೃತ್ವದಲ್ಲಿ ಹಾಗು ಎಣ್ಮಕಜೆ ಸಂಸ್ಕಾರ ಪ್ರಮುಖ ಹಾಗು ಗುರಿಕ್ಕಾರರೂ ಆದ ಡಾ ಸದಾಶಿವ ಭಟ್ ಇವರ ನೇತೃತ್ವದಲ್ಲಿ, ಇವರನ್ನೊಳಗೊಂಡ ಹನ್ನೆರಡು ಮಂದಿ ವೇದಮೂರ್ತಿಗಳೂ ವೈದಿಕ ವಿಧ್ವಾಂಸರುಗಳಾದ ಶ್ರೀನಿವಾಸ ಭಟ್ ಮಿತ್ತೂರು, ನೀರಮೂಲೆ ಗೋಪಾಲಕೃಷ್ಣ ಭಟ್, ಚಂದ್ರಶೇಖರ ಭಟ್ ಪಳ್ಳತ್ತಡ್ಕ, ಶಿವದ್ರಸಾದ ಭಟ್ ಪೆರಡಾಲ, ಸುವೀರ ಭಟ್ ಪೆದಮಲೆ, ಅಭಿರಾಮ ಭಟ್ ಸುಳ್ಯ, ಸುಬ್ರಹ್ಮಣ್ಯ ಪ್ರಸನ್ನ ಶಿಮಿಲಡ್ಕ, ಉದಯಶಂಕರ ಭಟ್ ಕುಂಟಿಕಾನ ಮಠ, ಕೃಷ್ಣ ರಾಜ ನಿಡುಗಳ, ಸುದರ್ಶನ ಭಟ್ ಕೇಕಣಾಜೆ, ಪ್ರಶಾಂತ ಭಟ್ ಪೆಲತ್ತಡ್ಕ ಇವರು ವಾಲ್ಮೀಕಿ ರಾಮಾಯಣವನ್ನು ಸತತ ಒಂಬತ್ತುದಿವಸಗಳ ಕಾಲ ನವಾಹ ವಿಧಿಯಲ್ಲಿ
1ನೇಯ ದಿನ 20/10 ರಂದು - ಬಾಲಕಾಂಡ.
2ನೇಯ ದಿನ 21/10 ರಂದು - ಅಯೋಧ್ಯಾಕಾಂಡ.
3ನೇಯ ದಿನ 22/10 ರಂದು - ಅಯೊದ್ಯಾಕಾಂಡ.
4ನೇಯ ದಿನ 23/10 ರಂದು - ಆರಣ್ಯಕಾಂಡ.
5ನೇಯ ದಿನ 24/10 ರಂದು - ಕಿಷ್ಕಿಂಧಾಕಾಂಡ.
6ನೇಯ ದಿನ 25/10 ರಂದು - ಸುಂದರಕಾಂಡ.
7ನೇಯ ದಿನ 26/10 ರಂದು - ಯುದ್ಧಕಾಂಡ.
8ನೇಯ ದಿನ 27/10 ರಂದು - ಯುದ್ಧಕಾಂಡ.
9ನೇಯ ದಿನ 28/10 ರಂದು - ಯುದ್ಧಕಾಂಡ.
ಈ ರೀತಿಯಲ್ಲಿ ಶ್ರದ್ಧಾ ಭಕ್ತಿ ಪೂರ್ವಕ ನಡೆಸಿಕೊಟ್ಟರು.
ಇತರ ಧಾರ್ಮಿಕ ಕಾರ್ಯಕ್ರಮಗಳನ್ನು ವೇದಮೂರ್ತಿಗಳಾದ ಮಾಣಿ ವಲಯದ ಸಂಸ್ಕಾರ ಪ್ರದಾನ ಶ್ರೀನಿಧಿ ಮಿತ್ತೂರು, ಅಮೈ ಶಿವ ಪ್ರಸಾದ ಭಟ್, ಮಿತ್ತೂರು ನರಸಿಂಹ ಭಟ್, ಪಳ್ಳತ್ತಡ್ಕ ಶಶಿಧರ ಭಟ್, ಮಂಜಳಗಿರಿ ಶ್ರೀಪತಿ ಭಟ್ ಬಳ್ಳಕ, ಅಮೈ ಕುಮಾರೇಶ ಭಟ್, ಸತ್ಯಶಂಕ ಉಪಾಧ್ಯಾಯ ಮಣಿಮುಂಡ ಇವರು ನೆರವೇರಿಸಿ ಕೊಟ್ಟರು.
ಕಾರ್ಯಕ್ರಮದ ಪ್ರತಿದಿವಸ ಗುರುವಂದನೆ, ಗೋಪೂಜೆ, ಶ್ರೀರಾಮ ಕಲ್ಪೋಕ್ತಪೂಜೆ, ಗೋಪಾಲಕೃಷ್ಣ ಕಲ್ಪೋಕ್ತಪೂಜೆ ಹಾಗು ಶಿಷ್ಯ ಭಕ್ತರ ಹಾಗು ಲೋಕಕಲ್ಯಾಣಕ್ಕಾಗಿ ಪ್ರಾರ್ತನೆಗಳು ಶ್ರದ್ಧಾ ಭಕ್ತಿ ಪೂರ್ವಕ ಜರಗಿತು.
ಬಾಲಕಾಂಡದ ಪಾರಾಯಣ ಸಂದರ್ಭದಲ್ಲಿ ತಾ 20/10ರಂದು ಶ್ರೀ ರಾಮ ಜನ್ಮ ಮಹೋತ್ಸವ ಹಾಗು ಸೀತಾ ಕಲ್ಯಾಣೋತ್ಸವನ್ನು ವಿಷೇಶವಾಗಿ ಆಚರಣೆ.
ಸುಂದರಕಾಂಡದ ಪಾರಾಯಣ ಸಂಧರ್ಭದಲ್ಲಿ ತಾ 25/10 ರಿಂದ ಆಂಜನೇಯ ಸ್ವಾಮಿಗೆ ಮುಷ್ಟಿ ದ್ರವ್ಯ, ತಿಲತೈಲ, ಜೇನು ಹಾಗು ಸೀಯಾಳ ಸಮರ್ಪಿಸಲಾಯಿತು ಹಾಗು ಕಾರ್ಯಕ್ರಮದ ಕೊನೆಯ ತನಕ ಆಸಕ್ತ ಭಕ್ತರಿಗೆ ಈ ಸಮರ್ಪಣೆಗೆ ಅವಕಾಶ ನೀಡಲಾಯಿತು.
ತಾ 27/10 ರಂದು ಶುಕ್ರವಾರದಂದು ಮಾತೆಯರಿಂದ ಕುಂಮಾರ್ಚನೆ ಹಾಗು ರಾತ್ರೆ ಸಪ್ತಶತಿ ಪಾರಾಯಣದೊಂದಿಗೆ ದುರ್ಗಾ ಪೂಜೆ, ಎಣ್ಮಕಜೆ ವಲಯ ಅಧ್ಯಕ್ಷರಾದ ಶಿವಪ್ರಸಾದ ದಂಪತಿ ವರ್ಮುಡಿ ಇವರು ದುರ್ಗಾಪೂಜೆ ನೆರವೇರಿಸಿದರು.
ತಾ 28/10 ಶನಿವಾರ ಗೋಪಾಷ್ಟಮಿ ಹಾಗು ಗೋಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ ಗೋವರ್ಧನ ಮಾಹಾಯಾಗ ಸಾಯಂಕಾಲ ವಿಷೇಶವಾಗಿ ದೇಸೀ ಗೋವಿನ ಸಗಣಿ ಹಾಗು ಬೆರಣಿಯಿಂದ ತಯಾರಿಸಿಗ ಅಲಂಕೃತ ಗೋವರ್ಧನ ಪರ್ವತದಲ್ಲಿ ಭಗವಾನ್ ಶ್ರೀ ಗೋಪಾಲಕೃಷ್ಣನಿಗೆ ಸಹಸ್ರ ದೀಪೋತ್ಸವದೊಂದಿಗೆ ಗೋಪಾಲಕೃಷ್ಣ ಕಲ್ಪೋಕ್ತ ಪೂಜೆ ಜರಗಿತು. ಶ್ರೀ ಮಾತಾ ಭಾಜನಾ ಮಂಡಳಿ ಬದಿಯಡ್ಕ ಹಾಗು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಬಜಕೂಡ್ಲು ಇವರಿಂದ ಭಜನಾ ಸೇವೆ ಈ ಸಂಧರ್ಬದಲ್ಲಿ ಜರಗಿತು. ಗೋಪಾಷ್ಟಮಿ ಕಾರ್ಯಕ್ರಮವನ್ನು ಗೋಶಾಲೆ ಅಧ್ಯಕ್ಷರಾದ ಬಿ.ಜಿ ಜಗದೀಶ್ ದಂಪತಿಗಳು ನೆರವೇರಿಸಿದರು.
ತಾ 29/10/2017ರ ಆದಿತ್ಯವಾರ ಪ್ರಾತಃಕಾಲ ರುದ್ರಪಾರಾಯಣ, ಕುಂಕುಮಾರ್ಚನೆ ಪಟ್ಟಾಭಿಷೇಕ ಹವನ ಹಾಗು ಶ್ರೀರಾಮ ಪಟ್ಟಾಭಿಷೇಕ ಕಾರ್ಯಕ್ರಮ ರಾಜೋಪಚಾರ, ಕಪ್ಪಕಾಣಿಕೆ ಸಮರ್ಪಣೆಯೊಂಗೆ ವಿಜ್ರಂಭಣೆಯಿಂದ ಜರಗಿತು, ಈ ಕಾರ್ಯಕ್ರಮವನ್ನು ಎಣ್ಮಕಜೆ ವಲಯ ದಿಗ್ದರ್ಶಕರೂ ಮುಳ್ಳೇರಿಯಾ ಮಂಡಲ ಕಾರ್ಯದರ್ಶಿಗಳೂ ಹಾಗು ರಾಮಾಯಣ ಪಾರಾಯಣ ಸಮಿತಿ ಸಂಚಾಲಕರಾದ ಸರ್ಪಮಲೆ ಬಾಲಸುಬ್ರಹ್ಮಣ್ಯ ಭಟ್ ದಂಪತಿಗಳು ನೆರವೇರಿಸಿದರು.
ಪಟ್ಟಾಭಿಷೇಕದ ಪ್ರಯುಕ್ತ ನಡೆದ ಧರ್ಮ ಸಂಸತ್ನಲ್ಲಿ ವಿದ್ವಾನ್ ಕೇಕಣಾಜೆ ಕೇಶವ ಭಟ್ ಇವರಿಂದ ರಾಮಾಯಣದ ಬಗ್ಗೆ ವಿಷೇಶ ಪ್ರವಚನ ನಡೆಯಿತು.
ಗೋ ಶಾಲೆಯ ಗೌರವ ಅಧ್ಯಕ್ಷರಾದ ಬ್ರಹ್ಮ ಶ್ರೀ ರವೀಶ ತಂತ್ರಿ ಕುಂಟಾರು ಇವರು ಮಾತನಾಡಿ ರಾಮಾಯಣ ಪಾರಾಯಣದಿಂದ ಬಜಕೂಡ್ಲು ಗೋಶಾಲೆಯ ಇವತ್ತು ಅಯೋಧ್ಯೆಯ ವಾತಾವರಣವಾಗಿ ಮಾರ್ಪಟ್ಟಿದೆ, ಪರಮ ಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹಮ್ಮಿಕೊಂಡ ಪ್ರತಿಯೊಂದು ಕಾರ್ಯಗಳು ಇಡೀ ಹಿಂದೂ ಸಮಾಜದ ಉದ್ಧಾರಕ್ಕಾಗಿ ನಡೆಯುತ್ತಿದ್ದು ಇಡೀ ಹಿಂದೂ ಸಮಾಜ ಇವರ ಈ ಧರ್ಮ ಸಂಮ್ರಕ್ಷಣೆಯ ಪುಣ್ಯಕಾರ್ಯ ಕೈ ಜೋಡಿಸಲು ಕರೆಯಿತ್ತರು.
ಮುಳ್ಳೇರಿಯಾ ಮಂಡಲದಲ್ಲಿ ಇದುವರೆಗೆ ನೂರಕ್ಕೂ ಮಿಕ್ಕಿ ರಾಮಾಯಣ ಪಾರಾಯಣ ನಡೆದಿದ್ದು ಮಂಲದ ಎಲ್ಲಾ ವಲಯಗಳಲ್ಲಿ ವೈಯಕ್ತಿಕವಾಗಿ ರಾಮಾಯಣ ಪಾರಾಯಣ ನಡೆಸಿದರನ್ನು ಈ ಸಂದರ್ಭದಲ್ಲಿ ವಿಷೇಶ ಅನುಗ್ರಹ ಪ್ರಸಾದವಿತ್ತು ಗೌರವಿಸಲಾಯಿತು.
ಮಹಾಮಂಡಲ ಅಧ್ಯಕ್ಷೆ ಈಶ್ವರೀ ಬೇರ್ಕಡವು ಹಾಗು ಕಾರ್ಯದರ್ಶಿ ಹರಿಪ್ರಸಾದ ಪೆರಿಯಪ್ಪು ಇವರು ರಾಮಾಯಣ ಪಾರಾಯಣದ ಶ್ರೀ ಗುರುಗಳ ಉದ್ದೇಶ ಹಾಗು ಸಂಕಲ್ಪವನ್ನು ವಿವರಿಸಿದರು.
ಮುಳ್ಳೇರಿಯಾ ಮಂಡಲದ ಹಾಗು ವಿವಿಧ ವಲಯಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ವೈಶಿಷ್ಟ್ಯಗಳು :-
ಅಲಂಕೃತ ದೇವತಾ ಪೂಜೆ, ಆಂಜನೇಯ ಪೀಠ.
ಆಸಕ್ತ ಭಕ್ತರಿಗೆ ಶ್ರೀ ರಾಮ ಸಂಕಲ್ಪ ಪೂಜೆ ಗೋ ಪೂಜೆ ಹಾಗು ಆಂಜನೇಯ ಸ್ವಾಮಿಗೆ ಮುಷ್ಟಿ ದ್ರವ್ಯ ಸಮರ್ಪಣೆ ನೆರವೇರಿಸಲು ವ್ಯವಸ್ಥೆ.
ದೇಸೀ ಗೋವಿನ ಸೆಗಣಿ ಹಾಗು ಬೆರಣಿಯಿಂದ ತಯಾರಿಸಿದ ವಿಷೇಶವಾಗಿ ಅಲಂಕೃತ ಗೋವರ್ಧನ ಪರ್ವತ ಹಾಗೂ ಸಹಸ್ರ ದೀಪೋತ್ಸವದೊಂದಿಗೆ ಜರಗಿದ ಗೋಪಾಷ್ಟಮಿ ಕಾರ್ಯಕ್ರಮ.
ರಾಮಾಯಣ ಪಾರಾಯಣ ಸಮಿತಿ ಹಾಗು ಸ್ಥಳೀಯ ನಿರ್ವಹಣಾ ಸಮಿತಿಯಿಂದ ಅಚ್ಚುಕಟ್ಟಾಗಿ ಸತತ ಹತ್ತು ದಿವಸಗಳ ಕಾಲ ಯಶಸ್ವಿಯಾಗಿ ನೆರವೇರದ ಕಾರ್ಯಕ್ರಮ.
ಮಹಾಮಂಡಲ ಧರ್ಮ ಕರ್ಮ ಸಹ ಕಾರ್ಯದರ್ಶಿ ಕೇಶವ ಪ್ರಸಾದ ಕೂಟೇಲು ಇವರ ನೇತೃತ್ವದಲ್ಲಿ ಎಲ್ಲಾ ಧಾರ್ಮಿಕ ಕಾರ್ಯಕ್ರಮ.
ಮುಳ್ಳೇರಿಯಾ ಮಂಡಲ ಹಾಗು ಎಣ್ಮಕಜೆ ವಲಯಗಳ ಸೇವಾ ವಿಭಾಗ ಸೇವಾ ಅರ್ಘ್ಯ ನಡೆಸಿ ಕಾರ್ಯಕ್ರಮದ ಸಕಲ ಸಿದ್ದತೆ.
ಪ್ರತಿ ದಿವಸ ಸ್ಥಳೀಯ ನಿರ್ವಹಣಾ ಸಮಿತಿಯ ನೇತೃತ್ವದಲ್ಲಿ ಮುಳ್ಳೇರಿಯಾ ಮಂಡಲದ ಒಂದೊಂದು ವಲಯಗಳ ಸೇವಾ ಭಿಂದುಗಳು ಕಾರ್ಯಕರ್ತರಾಗಿ ಸೇವೆ ಸಲ್ಲಿಸಿ ಅಚ್ಚುಕಟ್ಟಾಗಿ ಸಕಲ ವ್ಯವಸ್ಥೆ.
ಪ್ರತಿ ದಿವಸ ಗೋಪಾಲಕೃಷ್ಣ ಪೂಜೆ, ಶ್ರೀ ಸಿತಾ ರಾಮ ದೇವರ ಪೂಜೆ, ಗುರ ಪೂಜೆ, ಗೋ ಪೂಜೆಗಳೊಂದಿಗೆ ಪ್ರವಚನಾದಿ ಧಾರ್ಮಿಕ ಕಾರ್ಯಕ್ರಮ ಪ್ರಾರಂಭ ಹಾಗು ಪ್ರದೋಷ ಪೂಜೆಯೊಂದಿಗೆ ದಿನದ ಕಾರ್ಯಕ್ರಮದ ಮಂಗಳ.
ಪ್ರತಿ ದಿನ ವಿಷೇಶ ಭಕ್ಷ್ಯ, ಪರಮಾನ್ನ ನೈವೇದ್ಯ ನಡೆಸಿ ಅನ್ನ ಸಂತರ್ಪಣೆ.
ಪ್ರತಿ ದಿವಸದ ಕಾರ್ಯಕ್ರಮ ನಂತರ ಸ್ವಚ್ಚತೆ, ಮರುದಿವಸದ ಕಾರ್ಯಕ್ರಮದ ಸಿದ್ದತೆ.
ಹಗಲ ರಾತ್ರಿ ಶ್ರಮವಹಿಸಿ ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸಿದ ಗುರುಭಕ್ತ ಸೇವಾ ಭಿಂದುಗಳು.
ರಾಮಾಯಣ ಪಾರಾಯಣ ಸಮಿತಿಯಿಂದ ಬಜಕೂಡ್ಲು ಅಮೃತಧಾರಾ ಗೋಶಾಲೆಗೆ ರೂ 1,00,000/- ಸಮರ್ಪಣೆ.
ಪಟ್ಟಾಭಿಷೇಕದ ನಂತರ ಸಾಯಂಕಾಲದ ಪ್ರದೋಷ ಪೂಜೆ ಯೊಂದಿಗೆ ಹತ್ತುದಿವಸಗಳ ಕಾರ್ಯಕ್ರಮದ ಮಂಗಲ.
There are no replies at the moment.