ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಾಹಾಸಾಮಿಗಳ ದಿವ್ಯಾನುಗ್ರಹದ ಮುಳ್ಳೇರಿಯಾ ಮಂಡಲಾಂತರ್ಗತ ಎಣ್ಮಕಜೆ ಹವ್ಯಕ ವಲಯ ಸಂಸ್ಕಾರ ಮತ್ತು ವೈದಿಕ ವಿಭಾಗ ವತಿಯಿಂದ ಬಜಕೂಡ್ಲು ಅಮೃತಧಾರಾ ಗೋಶಾಲೆಯ ಗೋವರ್ಧನ ಧರ್ಮ ಮಂದಿರದಲ್ಲಿ ಸ್ವಸ್ತಿ|ಶ್ರೀ ವಿಕಾರಿ ಸಂ| ಶ್ರಾವಣಪೂರ್ಣಿಮಾ ದಿನಾಂಕ 15-8-2019 ನೇ ಗುರುವಾರ ಬೆಳಗ್ಗೆ ಘಂಟೆ 9 ಯಿಂದ ಸಾಮೂಹಿಕ ಯಜುರುಪಾಕರ್ಮ ಕಾರ್ಯಕ್ರಮ ಜರಗಿತು.
ಯಜುರುಪಾಕರ್ಮದ ಅಂಗವಾಗಿ ಉಪಾಕರ್ಮ ಹೋಮ, ದೇವ ಋಷಿ ಪಿರ್ತು ಪೂಜೆ ಬಲಿ ತರ್ಪಣ, ಪಂಚಕಾಂಡ ಋಷಿ ಪೂಜೆ, ಬ್ರಹ್ಮ ಯಜ್ಞ, ಉಪವೀತಧಾರಣೆ, ಗೋಪೂಜೆ ಹಾಗು ಗೋಪಾಲಕೃಷ್ಣ ಪೂಜೆ ಮಹಾಮಂಡಲ ಧರ್ಮ ಕರ್ಮ ಸಹಕಾರ್ಯದರ್ಶಿ ವೇ|ಮೂ| ಕೇಶವಪ್ರಸಾದ ಕೂಟೇಲು ಇವರ ನೇತೃತ್ವದಲ್ಲಿ ವೇ|ಮೂ| ಮಹೇಶ ಉಪಾಧ್ಯಾಯ ಮಣಿಮುಂಡ ಇವರ ಸಹಾಯದೊಂದಿಗೆ ನೆರವೇರಿತು.
There are no replies at the moment.