News & Events

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಮಿಗಳ ದಿವ್ಯ ಅನುಗ್ರಹ ಮಾರ್ಗದರ್ಶನದಲ್ಲಿ ಕಾರ್ಯಾಚರಿಸುತ್ತಿರುವ ಅಮೃತಧಾರಾ ಗೋಶಾಲೆ, ಗೋಲೋಕ ಬಜಕೂಡ್ಲುವಿನಲ್ಲಿ ತಾ 1/08/2019 ಆಷಾಢ ಅಮಾವಾಸ್ಯೆಯ ಆಶ್ಲೇಷಾ ನಕ್ಷತ್ರದ ಗುರುವಾರದಂದು ಸಾಯಂಕಾಲ ಲೋಕಕ್ಷೇಮಾರ್ಥವಾಗಿ ಸಾಮೂಹಿಕ ಆಶ್ಲೇಷಾ ಬಲಿ ಸೇವೆಯು ಜರಗಿತು.

ಮಹಾಮಂಡಲ ಧರ್ಮ ಕರ್ಮ ಸಹಕಾರ್ಯದರ್ಶಿ ವೇ ಮೂ ಕೇಶವಪ್ರಸಾದ ಕೂಟೇಲು ಇವರ ನೇತೃತ್ವದಲ್ಲಿ, ಮಂಗಳೂರು ಮಂಡಲ ವೈದಿಕ ಪ್ರಧಾನ ವೇ| ಮೂ| ಶಿವಪ್ರಸಾದ ಅಮೈ, ವೇ| ಮೂ| ಶ್ರೀನಿಧಿ ಬಾಳೆಹಿತ್ತಿಲು, ವೇ| ಮೂ| ಮಹೇಶ ಉಪಾಧ್ಯಾಯ ಮಣಿಮುಂಡ, ವೇ| ಮೂ| ಪ್ರಮೋದ ಕುಡಾಣ ಹಾಗು ಪ್ರವೀಣ ಅಡಿಗ ಬಜಕೂಡ್ಲು ಇವರ ಸಹಾಯದಿಂದ ಸಾಯಂಕಾಲ 5ಕ್ಕೆ ಗುರು ವಂದನೆ ಹಾಗು ಪ್ರಾರ್ಥನೆ ಯೊಂದಿಗೆ ಆಶ್ಲೇಷಾ ಬಲಿ, ಗೋಪಾಲಕೃಷ್ಣ ಪೂಜೆ, ಗೋಪೂಜ, ಭಜನೆ ಜರಗಿತು.

Leave a Reply



There are no replies at the moment.