ತಾ 7/11/2018 ಬುಧವಾರ ದೀಪಾವಳೀ ಅಮಾವಾಸ್ಯಾ.
ಅಮೃತಧಾರಾ ಗೋಶಾಲೆ ಬಜಕೂಡ್ಲುವಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಗೋವರ್ಧನ ಧರ್ಮ ಮಂದಿರದಲ್ಲಿ ಗೋ ಪೂಜೆ, ದೇವಪ್ರಾರ್ಥನೆ, ಸಪ್ತಶುದ್ದಿ, ಪುಣ್ಯಾಹ ಮಂಟಪ ಸಂಸ್ಕಾರ, ವಾಸ್ತು ಪೂಜೆ, ರಾಕ್ಷೋಘ್ನಹೋಮ ಹಾಗು ಸುದರ್ಶನ ಹವನವು ಮಹಾಮಂಡಲ ಧರ್ಮ ಕರ್ಮ ಸಹಕಾರ್ಯದರ್ಶಿ ವೇ| ಮೂ| ಕೇಶವಪ್ರಸಾದ ಕೂಟೇಲು ಇವರ ನೇತೃತ್ವದಲ್ಲಿ ಮಂಗಳೂರು ಮಂಡಲ ವೈದಿಕ ಪ್ರಮುಖ ಅಮೈ ಶಿವಪ್ರಸಾದ, ವೈದಿಕ ವಿದ್ವಾಂಸರಾದ ಕಲ್ಲುಕುಟ್ಟಿಮೂಲೆ ರವಿಶಂಕರ ಭಟ್ಟ, ಶುಳುವಾಲ ಮೂಲೆ ಶಿವ ಸುಬ್ರಹ್ಮಣ್ಯ ಭಟ್ಟ, ಬಾಕಿಲಪದವು ಗಣಪತಿ ಭಟ್ಟ, ಮಣಿಮುಂಡ ಮಹೇಶ ಉಪಾಧ್ಯಾಯ, ಶ್ರೀನಿಧಿ ಭಟ್ಟ ಬಾಳೆಹಿತ್ತಿಲು, ಚಂದ್ರ ನಾವಡ ಬಜಕೂಡ್ಲು, ಚಂದ್ರಶೇಖರ ಭಟ್ಟ ಪಳ್ಳತ್ತಡ್ಕ, ಚಂದ್ರಗಿರಿ ವಲಯ ವೈದಿಕ ಪ್ರಮುಖ ನರಸಿಂಹ ರಾಜ, ವಿಷ್ಣು ಶರ್ಮ ಕೋರಿಕ್ಕಾರು ಕುಮಾರ ಕಾನದಮೂಲೆ ಮುಂತಾದವರ ಸಹಯೋಗದಲ್ಲಿ ಜರಗಿತು.
ತಾ 8/11/2018 ಗುರುವಾರ ದಿಂದ 14/11/2018 ಬುಧವಾರದ ತನಕ ಪ್ರಾತಃ ಕಾಲ ಗಣಪತಿ ಹವನ ಕಾಮಧೇನು ಹವನ ಸಾಯಂಕಾಲ ಭಜನಾ ರಾಮಾಯಣ ಪಾರಾಯಣ, ವಿಷ್ಣು ಸಹಸ್ರನಾಮ ಪಾರಾಯಣ ಗೋ ಪೂಜೆ, ತುಳಸೀ ಪೂಜೆ, ಗೋಪಾಲಕೃಷ್ಣ ಪೂಜೆ ಹಾಗು ರಾತ್ರಿ 7 ರಿಂದ ದೀಪೋತ್ಸವ ಮಹಾ ಮಂಗಳಾರತಿ ಪ್ರತಿದಿವಸ ಮಹಾಮಂಡಲ ಧರ್ಮ ಕರ್ಮ ಸಹಕಾರ್ಯದರ್ಶಿ ವೇ| ಮೂ| ಕೇಶವಪ್ರಸಾದ ಕೂಟೇಲು ಇವರ ನೇತೃತ್ವದಲ್ಲಿ ನೆರವೇರಿತು.
There are no replies at the moment.